You cannot copy content of this page.
. . .

ಅಡುಗೆ ಅನಿಲ ದರ ಹೆಚ್ಚಳ ಹಿನ್ನೆಲೆ; ಮಹಿಳಾ ಕಾಂಗ್ರೆಸ್ ಪ್ರತಿಭಟನೆ

 ಪದೇ, ಪದೇ ಅಡುಗೆ ಅನಿಲ ದರವನ್ನು ಹೆಚ್ಚಿಸುವ ಮೂಲಕ ಕೇಂದ್ರ ಸರ್ಕಾರ ಜನರನ್ನು ಸಂಕಷ್ಟದಲ್ಲಿ ದೂಡುತ್ತಿದೆ ಎಂದು ಆರೋಪಿಸಿ ಮಹಿಳಾ ಕಾಂಗ್ರೆಸ್ ವತಿಯಿಂದ ಮೈಸೂರಿನಲ್ಲಿ ಪ್ರತಿಭಟನೆ ನಡೆಸಲಾಯಿತು.
  ಶುಕ್ರವಾರ ಬೆಳಿಗ್ಗೆ ನಗರದ ಗಾಂಧಿ ವೃತ್ತದ ಮುಂಭಾಗ ಜಮಾವಣೆಗೊಂಡ ಮಹಿಳಾ ಕಾಂಗ್ರೆಸ್ ಪದಾಧಿಕಾರಿಗಳು ಹಾಗೂ ಕಾರ್ಯಕರ್ತರು, ಅಡುಗೆ ಅನಿಲ ಬೆಲೆ ಹೆಚ್ಚಳ ವಿರೋಧಿಸಿ ಕೇಂದ್ರ ಸರ್ಕಾರದ ವಿರುದ್ಧ ನಾನಾ ಘೋಷಣೆಗಳನ್ನು ಕೂಗಿ ಆಕ್ರೋಶ ವ್ಯಕ್ತಪಡಿಸಿದರು.
ಇದೇ ವೇಳೆ ಮಾತನಾಡಿದ ಮಹಿಳಾ ಕಾಂಗ್ರೆಸ್ ನಗರಾಧ್ಯಕ್ಷರಾದ ಪುಷ್ಪಲತಾ ಚಿಕ್ಕಣ್ಣ, ಕೇಂದ್ರ ಸರ್ಕಾರ ಜನರಿಗೆ ತೊಂದರೆ ನೀಡುವ ನೀತಿಗಳನ್ನು ಮುಂದುವರೆಸಿಕೊಂಡು ಬಂದಿದೆ. ಅದಕ್ಕೆ ಮತ್ತೊಂದು ಸೇರ್ಪಡೆ ಎಂಬಂತೆ ಅಡುಗೆ ಅನಿಲ ದರವನ್ನು ಏರಿಸಿ ಜನರಿಗೆ ಮತ್ತೊಂದು ಸಂಕಷ್ಟವನ್ನು ತಂದೊಡ್ಡಿದೆ ಎಂದು ಆರೋಪಿಸಿದರು.
  ಮಹಿಳಾ ಕಾಂಗ್ರೆಸ್‌ನ ನಗರಾಧ್ಯಕ್ಷರಾದ ಪುಷ್ಪಲತಾ ಚಿಕ್ಕಣ್ಣ, ಗ್ರಾಮಾಂತರ ಅಧ್ಯಕ್ಷರಾದ ಲತಾ ಸಿದ್ದಶೆಟ್ಟಿ, ನಗರಪಾಲಿಕೆ ಸದಸ್ಯೆ ಶೋಭಾ ಸುನಿಲ್, ಮುಖಂಡರಾದ ಲತಾ ಮೋಹನ್, ಪುಷ್ಪವಲ್ಲಿ, ನಾಗರತ್ನ, ಭಾಗ್ಯಮ್ಮ, ಇಂದ್ರ, ಜ್ಯೋತಿ, ಚಂದ್ರಕಲಾ, ಚಿಂತಾಯಮ್ಮ, ಪ್ಯಾರೀಜಾನ್, ನಾಸಿರಾ ಬೇಗಂ, ಸೌಭಾಗ್ಯ, ಹೆಚ್.ಜೆ.ಮಂಜುಳ, ಮಂಜುಳ, ಮಮತ, ರಾಜಲಕ್ಷ್ಮಿ, ಲೀಲಾವತಿ, ಜಯ ಸುಂದರಮ್ಮ ಇನ್ನಿತರರು ಪ್ರತಿಭಟನೆಯಲ್ಲಿ ಹಾಜರಿದ್ದರು.

Leave a Reply

 

%d bloggers like this: